Samutkarsh

Civil Service Academy

samutkarshias@gmail.com

ಯುಪಿಎಸ್­ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ 11 ಅಭ್ಯರ್ಥಿಗಳು ತೇರ್ಗಡೆ

ಬೆಂಗಳೂರು: ಸಮುತ್ಕರ್ಷ ಐಎಎಸ್ ಅಕಾಡೆಮಿ ಹುಬ್ಬಳ್ಳಿ ದೆಹಲಿಯ ಸಂಕಲ್ಪ ಐಎಎಸ್ ಅಕಾಡೆಮಿ ಸಹಯೋಗದೊಂದಿಗೆ 2018-19 ರ ಸಾಲಿನ ಯುಪಿಎಸ್­ಸಿ ಪರೀಕ್ಷೆಯಲ್ಲಿ ಸಮುತ್ಕರ್ಷದ 11 ಜನ ಅಭ್ಯರ್ಥಿಗಳು ತೇಗ೯ಡೆಯಾಗಿದ್ದಾರೆ.

ಜನವರಿಯಲ್ಲಿ ನಡೆದ ಮಾದರಿ ಸಂದರ್ಶನ ಕಾರ್ಯಕ್ರಮದಲ್ಲಿ 16 ಅಭ್ಯರ್ಥಿಗಳು, ಸಂದರ್ಶನದಲ್ಲಿ ಪಾಲ್ಗೊಂಡಿದ್ದರು, ಅದರಲ್ಲಿ 2018-19 ರ ಪರೀಕ್ಷೆಯಲ್ಲಿ 7 ಅಭ್ಯರ್ಥಿಗಳು, 2017-18 ಸಾಲಿನ ಪರೀಕ್ಷೆಯಲ್ಲಿ 3 ಅಭ್ಯರ್ಥಿಗಳು, 2016-17 ರ ಸಾಲಿನ ಪರೀಕ್ಷೆಯಲ್ಲಿ ಒಬ್ಬ ಅಭ್ಯರ್ಥಿ ತೇರ್ಗಡೆಯಾಗಿರುವುದು ಸಂತಸದ ಸಂಗತಿ. ವಿಜಯಭರತ್ ರೆಡ್ಡಿ (228 ), ಯಶಸ್ವಿನಿ ಬಿ. (293), ಗಿರೀಶ ಕಲಗೊಂಡ (307), ನೀಲಂ ಲಲಿತಾದಿತ್ಯ (470), ಎನ್ ವಿ ಎನ್ ವಿ ಲಕ್ಷ್ಮಿ ಸೌಜನ್ಯ (560), ಎಮ್ ಕೆ ಶೃತಿ (637), ಅಶೋಕಕುಮಾರ ಎಸ್ (711), ಶಿವ ನಿಹಾರಿಕಾ ಸಿಂಗ್ (237), ವಿವೇಕ ಎಚ್ ಬಿ (257), ದೀಪನ ಎಂ ಎನ್ (566), ಹರ್ಷವರ್ಧನ ಬಿ ಜೆ (352) ರ್‍ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಎಲ್ಲ ಸಾಧಕರಿಗೆ ಟ್ರಸ್ಟನ ಅಧ್ಯಕ್ಷರಾದ ಅಚ್ಯುತ್ ಲಿಮಯೆ ಮತ್ತು ಎಲ್ಲ ಪದಾಧಿಕಾರಿಗಳು ಶುಭಾಶಯಗಳನ್ನು ಕೋರಿದ್ದಾರೆ.

ಬರುವ ಜುಲೈನಿಂದ ಹುಬ್ಬಳ್ಳಿಯ ಅಧ್ಯಯನ ಕೇಂದ್ರದಲ್ಲಿ ಎರಡನೇ ಬ್ಯಾಚ್­ನ ತರಗತಿಗಳು ಪ್ರಾರಂಭವಾಗಲಿದ್ದು ಹೆಚ್ಚಿನ ಮಾಹಿತಿಗೆ 9739113612 ಗೆ ಸಂಪರ್ಕಿಸಲು ಕೋರಲಾಗಿದೆ ಎಂದು ಟ್ರಸ್ಟ್‌ನ ಕಾರ್ಯದರ್ಶಿ ನಾರಾಯಣ ಶಾನಭಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.