Samutkarsh IAS Academy Samutkarsh IAS Nation Building through IAS
All activities
Kumta

Village Visit to Tavargeri

ಸಮುತ್ಕರ್ಷ IAS ಕುಮಟಾ....
ದಿನಾಂಕ 5/1/2025 , ಭಾನುವಾರದಂದು ಶ್ರದ್ಧಾ- ಮೇಧಾ ವಿದ್ಯಾರ್ಥಿಗಳ ಕೋರ್ಸಿನ ಒಂದು ಭಾಗವಾದಂತಹ 'Village Visit' ನ್ನು ಆಯೋಜಿಸಲಾಗಿತ್ತು. ಕುಮಟಾದಿಂದ ಸುಮಾರು 150 ಕಿ. ಮೀ. ದೂರದಲ್ಲಿರುವ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ 'ತಾವರಗೇರಿ ' ಗ್ರಾಮಕ್ಕೆ ಭೇಟಿ ನೀಡಿದ್ದೆವು. ಬೆಳಿಗ್ಗೆ 6.30 ಕ್ಕೆ ಪ್ರಾರಂಭವಾದ ನಮ್ಮ ಪ್ರಯಾಣ ಅಲ್ಲಿ ಹೋಗಿ ತಲುಪುವವರೆಗೆ ಮದ್ಯಾಹ್ನ 11 ಗಂಟೆಯಾಗಿತ್ತು. ಆ ಊರಿಗೆ ತಲುಪಿದ ನಂತರ ಮೊದಲು ಊರಿನ ಕಲ್ಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದೆವು. ನಂತರ ಪ್ರತೀ 3 - 4 ಮಕ್ಕಳನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿ, ಆ ಊರಿನ ಕಾರ್ಯಕರ್ತರ ಜೊತೆ ಗ್ರಾಮ ಪಂಚಾಯತ, ಬಡಗಿಯವರ ಮನೆ, ಹೊಲ ಗದ್ದೆಗಳು, ಅಂಗಡಿಗಳು ಮುಂತಾದ ಕಡೆ ವಿಶೇಷ ಮಾಹಿತಿಗಳನ್ನು ಸಂಗ್ರಹಿಸುವುದಕ್ಕಾಗಿ ಕಳುಹಿಸಲಾಯಿತು. ನಂತರ ಮಧ್ಯಾಹ್ನದ ಭೋಜನಕ್ಕಾಗಿ ಪ್ರತೀ 5 ಮಕ್ಕಳಂತೆ ಗುಂಪುಗಳಾಗಿ ವಿಂಗಡಿಸಿ ಬೇರೆ ಬೇರೆ ಮನೆಗಳಿಗೆ ( ಪೂರ್ವ ನಿಗದಿಯಂತೆ) ಕಳುಹಿಸಲಾಯಿತು. ನಂತರ ತಾವರಗೇರಿ ಶಾಲೆಗೆ ಬಂದ ಮಕ್ಕಳು ಆ ದಿವಸದ ಅವರ ಹಳ್ಳಿಯ ಅನುಭವಗಳನ್ನು ಪರಸ್ಪರ ಹಂಚಿಕೊಂಡರು. ಅನಂತರ ಸ್ಥಳೀಯ ಜಲಮೂಲಗಳ ಬಗ್ಗೆ ತಿಳಿದುಕೊಳ್ಳಲು ಅದೇ ಊರಿನ ಮೂಲಕ ಹರಿದು ಬರುವ ಬೇಡ್ತಿ ನದಿಯ ದಡಕ್ಕೆ ಟ್ರ್ಯಾಕ್ಟರ್ ನಲ್ಲಿ ನಮ್ಮ ಪ್ರಯಾಣ ಅತ್ಯಂತ ಉಲ್ಲಾಸಭರಿತವಾಗಿ ಸಾಗಿತು. ಈ ಎಲ್ಲಾ ವಿಷಯಗಳು ಮಕ್ಕಳಿಗೆ ವಿಶೇಷವಾದ ಅನುಭವಗಳನ್ನು ಹಾಗೂ ಜ್ಞಾನವನ್ನು ನೀಡಿದವು. ಮಕ್ಕಳು ಆ ಹಳ್ಳಿಯಲ್ಲಿ ಕಳೆದ 7-8 ಗಂಟೆಗಳಲ್ಲಿ ಆ ಹಳ್ಳಿಯ ಜನ ಜೀವನ, ಬೆಳೆಯುವ ಬೆಳೆಗಳು, ಅವರ ಆಹಾರ ಪದ್ಧತಿ, ಶಿಕ್ಷಣ, ಅಲ್ಲಿಯ ಮೂಲ ಸೌಕರ್ಯಗಳು ಹಾಗೂ ಆ ಊರಿನಲ್ಲಿರುವ ಅವಿಭಕ್ತ ಕುಟುಂಬ ಪದ್ಧತಿಗಳ ಬಗ್ಗೆ ವಿಶೇಷವಾದ ಮಾಹಿತಿಗಳನ್ನು ತಿಳಿದುಕೊಂಡರು. ಶಿಕ್ಷಣವೆಂಬುದು ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಕಲಿಯುವುದು ಎನ್ನುವಂತಾಗಿರುವಾಗ ಮಕ್ಕಳು ಬಾಹ್ಯ ಪ್ರಪಂಚಕ್ಕೆ ತಮ್ಮನ್ನು ತಾವು ತೆರೆದುಕೊಂಡ ರೀತಿ ಅವಿಸ್ಮರಣೀಯ.
ವಂದನೆಗಳೊಂದಿಗೆ.....🙏

Photos from January 2025