Samutkarsh IAS Academy Samutkarsh IAS Nation Building through IAS

Our journey, week by week

Activities & Sessions

Reports from our sessions, events and field visits across every Samutkarsh centre — straight from our mentors and coordinators.

07 Jan 2024 Sirsi

Interest building and India map session

ದಿನಾಂಕ 7 ಜನವರಿ 2024

ಶ್ರೀ ವಸಂತ ಹೆಗಡೆ ಇವರು ಮಕ್ಕಳಿಗೆ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ಏಕೆ ಇರಬೇಕು ಅದರ ಪ್ರಯೋಜನ ಏನು ಎಂಬುದರ ಕುರಿತಾಗಿ ತಿಳಿಸಿದರು.

ಶ್ರೀ ಶ್ರೀಧರ ತೆಂಗಿನಗದ್ದೆ ಇವರು ಭಾರತ ಭೂಪಟ ಪರಿಚಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Photos from January 2024

+5
07 Jan 2024 Sirsi

Shraddha Medha valedictory ceremony

ದಿನಾಂಕ 6-1-24 ರಂದು ಸಮುತ್ಕರ್ಷ ಶಿರಸಿಯ ಶ್ರದ್ಧಾ ಮತ್ತು ಮೇಧಾ ತರಗತಿಗಳ ಸಮಾರೋಪ ಸಮಾರಂಭ ನಡೆಯಿತು.

ಸಮುತ್ಕರ್ಷದ ಶೈಕ್ಷಣಿಕ ವಿಭಾಗದ ವಕ್ತಾರರಾದ ಶ್ರೀ ವಿನೋದ ದೇಶಪಾಂಡೆಯವರು ಮಾತನಾಡಿ, ಸಮುತ್ಕರ್ಷದ ಧ್ಯೇಯೋದ್ದೇಶಗಳ ಕುರಿತಾಗಿ ಮತ್ತು ಈ ತರಗತಿಗಳ ನಂತರದ ಮುಂದಿನ ದಿನಗಳಲ್ಲಿ ಯಾವ ರೀತಿಯಾಗಿ ತನ್ನ ಕಾರ್ಯಕ್ರಮಗಳನ್ನು ಜೋಡಿಸಿಕೊಂಡಿದೆ ಎನ್ನುವುದನ್ನು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಆರ್. ಜಿ. ನಾಯ್ಕ, ಧರ್ಮದರ್ಶಿಗಳು ಮಾರಿಕಾಂಬಾ ದೇವಾಲಯ ಶಿರಸಿ ಇವರು ವಿದ್ಯಾರ್ಥಿಗಳು ಕಲಿಕೆಯ ಹಂತದಲ್ಲಿ ಚೆನ್ನಾಗಿ ತಮ್ಮನ್ನು ತೊಡಗಿಸಿಕೊಂಡು, ಆಸಕ್ತಿಯಿಂದ ಜ್ಞಾನ ಸಂಪಾದಿಸಿಕೊಳ್ಳಬೇಕೆಂದು ತಿಳಿಸಿದರು.

ಅತಿಥಿಗಳಾಗಿದ್ದ ಡಾ. ರಾಘವೇಂದ್ರ ಹೆಗಡೆಕಟ್ಟೆ, ಪ್ರಾಂಶುಪಾಲರು ಚೈತನ್ಯ ಪದವಿಪೂರ್ವ ಕಾಲೇಜು ಶಿರಸಿ ಇವರು ಮಾತನಾಡಿ, ಮಕ್ಕಳು ತಂದೆ-ತಾಯಿ, ಗುರುಗಳ ಮಾತುಗಳನ್ನು ಗೌರವಿಸಿ,‌ಅವರ ನುಡಿಯಂತೆ ನಡೆದಾಗ ಉತ್ತಮ‌ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ತಿಳಿಸಿದರು.

ವಿದ್ಯಾರ್ಥಿಗಳು ಮತ್ತು ಪಾಲಕರು ಶ್ರದ್ಧಾ ಮತ್ತು ಮೇಧಾ ತರಗತಿಗಳ ಕುರಿತಾಗಿ ಸದಭಿಪ್ರಾಯ ವ್ಯಕ್ತಪಡಿಸಿದ್ದರು.

ಮಕ್ಕಳಿಗೆ ಸರ್ಟಿಫಿಕೇಟ್ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.

ವಿದ್ಯಾರ್ಥಿಗಳು ಸಂಘಟನಾ ಮಂತ್ರ ಮತ್ತು ವಂದೇ ಮಾತರಂ ಗೀತೆಗಳನ್ನು ಪ್ರಸ್ತುತಪಡಿಸಿದರು. ಶ್ರೀ ಬಿ. ಡಿ. ನಾಯ್ಕ ಇವರು ಸ್ವಾಗತಿಸಿದರು. ಸಮುತ್ಕರ್ಷ ಶಿರಸಿಯ ಕೊ ಹೆಡ್ ಆಗಿರುವ ಶ್ರೀ ಗೌರವ ಪ್ರಭು ಹಾಗೂ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶ್ರೀಮತಿ ಸಂಧ್ಯಾ ಶಾಸ್ತ್ರಿಯವರು ವಂದನಾರ್ಪಣೆ ಮತ್ತು ಕಾರ್ಯಕ್ರಮದ ನಿರ್ವಹಣೆ ಮಾಡಿದರು.

ಸಭಾ ಕಾರ್ಯಕ್ರಮದ ನಂತರದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಮುತ್ಕರ್ಷ ಮಕ್ಕಳು ತಯಾರಿಸಿದ ನ್ಯೂಸ್ ಪೇಪರ್, ಚಿತ್ರ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ನಡೆಯಿತು.

Photos from January 2024

+5
24 Dec 2023 Sirsi

Achievements of ancient India session

ಸಮುತ್ಕರ್ಷ ಶಿರಸಿ

ಪ್ರಾಚೀನ ಭಾರತದ ಸಾಧನೆಗಳ ಕುರಿತು ಶ್ರೀ ಹೇಮಂತಕುಮಾರ ಕಪ್ಪಲಿ ಇವರು ತರಗತಿಗಳನ್ನು ನಡೆಸಿಕೊಟ್ಟರು..

Photos from December 2023

+3
17 Sep 2023 Sirsi

Shraddha Medha inauguration by Sirsi DFO

ಸಮುತ್ಕರ್ಷ ಟ್ರಸ್ಟ್‌ನ ಶ್ರದ್ಧಾ ಮತ್ತು ಮೇಧಾ (ಪ್ರಿ-ಐಎಎಸ್ ಫೌಂಡೇಶನ್ ತರಬೇತಿ) ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 16 ಸಪ್ಟೆಂಬರ್ ಅಂದು ಶಿರಸಿಯ ಎಂ. ಇ. ಎಸ್. ಚೈತನ್ಯ ಪಿ.ಯು. ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಿರಸಿ DFO ಅಜ್ಜಯ್ಯ ಅವರು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಜ್ಜಯ್ಯ ಜಿ. ಆರ್ ಅವರು ಮಾತನಾಡುತ್ತಾ, ತಾವು ಯಾವ ರೀತಿಯಲ್ಲಿ IFS ಪರೀಕ್ಷೆಯನ್ನು ಎದುರಿಸಿದರು ಎಂದು ತಿಳಿಸಿದರು. UPSC ಯ ವಿವಿಧ ಹುದ್ದೆಗಳ ಕುರಿತಾಗಿ, ಅದರ ತಯಾರಿಯ ಕುರಿತಾಗಿ ಅವರು ವಿವರಿಸಿದರು.‌ ಮಕ್ಕಳು ಈ ತರಬೇತಿಯ ಪ್ರಯೋಜನ ಪಡೆದುಕೊಂಡು, ಉತ್ತಮ ಹುದ್ದೆಗಳನ್ನು ಪಡೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಎಂ. ಇ. ಎಸ್.‌ಚೈತನ್ಯ ಪಿ.ಯು. ಕಾಲೇಜಿನ ಅಧ್ಯಕ್ಷರಾದ ಕೆ.ಬಿ. ಲೋಕೇಶ ಹೆಗಡೆಯವರು ಮಾತನಾಡಿ, ವಿದ್ಯಾರ್ಥಿಗಳನ್ನು ಅರಸಿಕೊಂಡು ಇಂದು ವಿದ್ಯೆ ಮನೆಬಾಗಿಲಿಗೇ ಬರುತ್ತಿದೆ, ಅದರ ಪ್ರಯೋಜನವನ್ನು ಮಕ್ಕಳು ತೆಗೆದುಕೊಳ್ಳಬೇಕು. ನಮ್ಮ ಶಿರಸಿ ಮತ್ತು ಸುತ್ತಮುತ್ತಲಿನ ಮಕ್ಕಳು ಅತ್ಯುತ್ತಮ ಅಧಿಕಾರಿಗಳಾಗಿ ಆಯ್ಕೆಯಾಗಲು ಈ ಕೋರ್ಸ್ ಸಹಕಾರಿಯಾಗಲಿದೆ.‌ ಎಲ್ಲರಿಗೂ ಇದರ ಪ್ರಯೋಜನ ಸಿಗಲಿ ಎಂದು ಹಾರೈಸಿದರು.

ಸಮುತ್ಕರ್ಷ ಟ್ರಸ್ಟಿನ ಡೈರೆಕ್ಟರ್ ಜನರಲ್ ಆದ ಜಿತೇಂದ್ರ ನಾಯಕ್ ಅವರು ಸಮುತ್ಕರ್ಷ ಟ್ರಸ್ಟಿನ ಧ್ಯೇಯೋದ್ದೇಶ, ಶ್ರದ್ಧಾ ಮತ್ತು ಮೇಧಾ ಕೋರ್ಸ್ಗಳ ಪ್ರಾಮುಖ್ಯತೆ ಮತ್ತು ಅದು ಒಳಗೊಂಡಿರುವ ಕಲಿಕಾಂಶಗಳ ಕುರಿತಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಿರಸಿ ಸಮುತ್ಕರ್ಷ ತಂಡದ ಪದಾಧಿಕಾರಿಗಳು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
03 Sep 2023 Sirsi

Shraddha Medha training inauguration with lamp lighting

ಸಮುತ್ಕರ್ಷ ತಂಡದ ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ.... ಇಂದು ಮುಂಜಾನೆ 10 ಗಂಟೆಗೆ ಸರಿಯಾಗಿ ಖ್ಯಾತವಾಗ್ಮಿಗಳು ಬಹುಮುಖ ಕಲಾವಿದರಾಗಿರುವ ಡಾಕ್ಟರ್ ಜಿ ಎಲ್ ಹೆಗಡೆ ಇವರಿಂದ ಸಮತ್ಕರ್ಷ ಶ್ರದ್ಧಾ ಮೇಧ ತಂಡದ ತರಬೇತಿಯ ಉದ್ಘಾಟನೆಯು ದೀಪ ಬೆಳಗಿಸುವುದರ ಮೂಲಕ ನೆರವೇರಿತು... ನಂತರ ಮಾತನಾಡಿದ ಶ್ರೀಯುತರು ಸಮತ್ಕರ್ಷ ಸಂಘಟನೆಯ ಕುರಿತಾಗಿ ಹರ್ಷವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಹನುಮಂತ್ ಶಾನಭಾಗ್ ರವರು ವಹಿಸಿದ್ದರು. ತಂಡದ ಪ್ರಮುಖರಾದ ಶ್ರೀ ಹರಿಶ್ಚಂದ್ರ ಗುನಗಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಂಡದ ಎಲ್ಲಾ ಸದಸ್ಯರ ಹಾಜರಾತಿಯು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು. ದಾಖಲಾತಿಯನ್ನು ಹೊಂದಿದ ಎಲ್ಲ ಮಕ್ಕಳು ಅವರ ಪಾಲಕರು ಸಹ ಉಪಸ್ಥಿತರಿದ್ದರು....