Samutkarsh IAS Academy Samutkarsh IAS Nation Building through IAS

Our journey, week by week

Activities & Sessions

Reports from our sessions, events and field visits across every Samutkarsh centre — straight from our mentors and coordinators.

07 Jan 2025 Kumta

Village Visit to Tavargeri

ಸಮುತ್ಕರ್ಷ IAS ಕುಮಟಾ....
ದಿನಾಂಕ 5/1/2025 , ಭಾನುವಾರದಂದು ಶ್ರದ್ಧಾ- ಮೇಧಾ ವಿದ್ಯಾರ್ಥಿಗಳ ಕೋರ್ಸಿನ ಒಂದು ಭಾಗವಾದಂತಹ 'Village Visit' ನ್ನು ಆಯೋಜಿಸಲಾಗಿತ್ತು. ಕುಮಟಾದಿಂದ ಸುಮಾರು 150 ಕಿ. ಮೀ. ದೂರದಲ್ಲಿರುವ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ 'ತಾವರಗೇರಿ ' ಗ್ರಾಮಕ್ಕೆ ಭೇಟಿ ನೀಡಿದ್ದೆವು. ಬೆಳಿಗ್ಗೆ 6.30 ಕ್ಕೆ ಪ್ರಾರಂಭವಾದ ನಮ್ಮ ಪ್ರಯಾಣ ಅಲ್ಲಿ ಹೋಗಿ ತಲುಪುವವರೆಗೆ ಮದ್ಯಾಹ್ನ 11 ಗಂಟೆಯಾಗಿತ್ತು. ಆ ಊರಿಗೆ ತಲುಪಿದ ನಂತರ ಮೊದಲು ಊರಿನ ಕಲ್ಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದೆವು. ನಂತರ ಪ್ರತೀ 3 - 4 ಮಕ್ಕಳನ್ನು ಬೇರೆ ಬೇರೆ ಗುಂಪುಗಳಾಗಿ ವಿಂಗಡಿಸಿ, ಆ ಊರಿನ ಕಾರ್ಯಕರ್ತರ ಜೊತೆ ಗ್ರಾಮ ಪಂಚಾಯತ, ಬಡಗಿಯವರ ಮನೆ, ಹೊಲ ಗದ್ದೆಗಳು, ಅಂಗಡಿಗಳು ಮುಂತಾದ ಕಡೆ ವಿಶೇಷ ಮಾಹಿತಿಗಳನ್ನು ಸಂಗ್ರಹಿಸುವುದಕ್ಕಾಗಿ ಕಳುಹಿಸಲಾಯಿತು. ನಂತರ ಮಧ್ಯಾಹ್ನದ ಭೋಜನಕ್ಕಾಗಿ ಪ್ರತೀ 5 ಮಕ್ಕಳಂತೆ ಗುಂಪುಗಳಾಗಿ ವಿಂಗಡಿಸಿ ಬೇರೆ ಬೇರೆ ಮನೆಗಳಿಗೆ ( ಪೂರ್ವ ನಿಗದಿಯಂತೆ) ಕಳುಹಿಸಲಾಯಿತು. ನಂತರ ತಾವರಗೇರಿ ಶಾಲೆಗೆ ಬಂದ ಮಕ್ಕಳು ಆ ದಿವಸದ ಅವರ ಹಳ್ಳಿಯ ಅನುಭವಗಳನ್ನು ಪರಸ್ಪರ ಹಂಚಿಕೊಂಡರು. ಅನಂತರ ಸ್ಥಳೀಯ ಜಲಮೂಲಗಳ ಬಗ್ಗೆ ತಿಳಿದುಕೊಳ್ಳಲು ಅದೇ ಊರಿನ ಮೂಲಕ ಹರಿದು ಬರುವ ಬೇಡ್ತಿ ನದಿಯ ದಡಕ್ಕೆ ಟ್ರ್ಯಾಕ್ಟರ್ ನಲ್ಲಿ ನಮ್ಮ ಪ್ರಯಾಣ ಅತ್ಯಂತ ಉಲ್ಲಾಸಭರಿತವಾಗಿ ಸಾಗಿತು. ಈ ಎಲ್ಲಾ ವಿಷಯಗಳು ಮಕ್ಕಳಿಗೆ ವಿಶೇಷವಾದ ಅನುಭವಗಳನ್ನು ಹಾಗೂ ಜ್ಞಾನವನ್ನು ನೀಡಿದವು. ಮಕ್ಕಳು ಆ ಹಳ್ಳಿಯಲ್ಲಿ ಕಳೆದ 7-8 ಗಂಟೆಗಳಲ್ಲಿ ಆ ಹಳ್ಳಿಯ ಜನ ಜೀವನ, ಬೆಳೆಯುವ ಬೆಳೆಗಳು, ಅವರ ಆಹಾರ ಪದ್ಧತಿ, ಶಿಕ್ಷಣ, ಅಲ್ಲಿಯ ಮೂಲ ಸೌಕರ್ಯಗಳು ಹಾಗೂ ಆ ಊರಿನಲ್ಲಿರುವ ಅವಿಭಕ್ತ ಕುಟುಂಬ ಪದ್ಧತಿಗಳ ಬಗ್ಗೆ ವಿಶೇಷವಾದ ಮಾಹಿತಿಗಳನ್ನು ತಿಳಿದುಕೊಂಡರು. ಶಿಕ್ಷಣವೆಂಬುದು ಕೇವಲ ನಾಲ್ಕು ಗೋಡೆಗಳ ಮಧ್ಯದಲ್ಲಿಯೇ ಕಲಿಯುವುದು ಎನ್ನುವಂತಾಗಿರುವಾಗ ಮಕ್ಕಳು ಬಾಹ್ಯ ಪ್ರಪಂಚಕ್ಕೆ ತಮ್ಮನ್ನು ತಾವು ತೆರೆದುಕೊಂಡ ರೀತಿ ಅವಿಸ್ಮರಣೀಯ.
ವಂದನೆಗಳೊಂದಿಗೆ.....🙏

Photos from January 2025

+4
30 Dec 2024 Kumta

Kutumba Prabodhane Family Session

ಸಮುತ್ಕರ್ಷ IAS ಕುಮಟಾ.....
ದಿನಾಂಕ 29/12/2024, ಭಾನುವಾರದಂದು ಶ್ರದ್ಧಾ - ಮೇಧಾ ವಿದ್ಯಾರ್ಥಿಗಳಿಗೆ 'ಕುಟುಂಬ ಪ್ರಬೋಧನ ' ಎಂಬ ತರಗತಿಯನ್ನು ನಡೆಸಲಾಯಿತು. ಈ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀಯುತ ವಿಶ್ವನಾಥ ನಾಯಕ್ ಅವರು ಕುಟುಂಬದ ಮಹತ್ವ , ಮಕ್ಕಳು ಕುಟುಂಬದ ಸದಸ್ಯರೊಂದಿಗೆ ನಡೆದುಕೊಳ್ಳಬೇಕಾದ ರೀತಿ - ನೀತಿಗಳು, ಒಂದು ಕುಟುಂಬ ಕೊಡುವ ಸಾಮಾಜಿಕ ಭದ್ರತೆ ಮುಂತಾದ ವಿಷಯಗಳ ಬಗ್ಗೆ ವಿವರಣೆ ನೀಡಿದರು. <This message was edited>

Photos from December 2024

+16
16 Dec 2024 Kumta

Art and Creativity Workshop

ಸಮುತ್ಕರ್ಷ IAS ಕುಮಟಾ....
ದಿನಾಂಕ 15/12/2024 , ಭಾನುವಾರದಂದು ಶ್ರದ್ಧಾ - ಮೇಧಾ ವಿದ್ಯಾರ್ಥಿಗಳಿಗೆ ' Art and creativity workshop ' ಗಳನ್ನು ಆಯೋಜಿಸಲಾಗಿತ್ತು. ಈ ಅವಧಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶ್ರೀಮತಿ ವನಿತಾ ಶೇಟ್ ಅವರು, ಹೆಚ್ಚಾಗಿ ಮನೆಗಳಲ್ಲಿ ಒಮ್ಮೆ ಉಪಯೋಗಿಸಿ ಬಿಸಾಡುವ ಪ್ಲಾಸ್ಟಿಕ್ ಚೀಲಗಳು ಅಥವಾ ಪೇಪರ್ ಗಳನ್ನು ಉಪಯೋಗಿಸಿಕೊಂಡು ವಿವಿಧ ಬಗೆಯ ಹೂವು ಹಾಗೂ ಮಾಲೆಗಳನ್ನು ತಯಾರಿಸುವ ರೀತಿಗಳನ್ನು ವಿವರಿಸಿದರು. ನಂತರ ಈ ಅಲಂಕಾರಿಕ ವಸ್ತುಗಳನ್ನು ಮಾರಾಟ ಮಾಡುವ ಹಾಗೂ ಲಾಭ ಗಳಿಸುವ ಮಾರ್ಗಗಳ ಬಗ್ಗೆ ತಿಳಿಸಿಕೊಟ್ಟರು . ಕೆಲವೊಂದು ಆಟಗಳ ಮುಖಾಂತರ ಮಕ್ಕಳ ಏಕಾಗ್ರತೆ ಹಾಗೂ ಕ್ರಿಯಾಶೀಲತೆ ಯನ್ನು ಹೆಚ್ಚಿಸುವ ಬಗೆಯನ್ನು ವಿವರಿಸಲಾಯಿತು.

Photos from December 2024

+16
08 Dec 2024 Kumta

Goal Setting and Skill Development

ಸಮುತ್ಕರ್ಷ IAS ಕುಮಟಾ....
ದಿನಾಂಕ 8/12/2024, ಭಾನುವಾರದಂದು ಶ್ರದ್ಧಾ - ಮೇಧಾ ವಿದ್ಯಾರ್ಥಿಗಳಿಗೆ 'Goal setting, career guidance and skill development' ಎಂಬ ವಿಷಯಗಳ ಕುರಿತು ತರಗತಿಗಳು ನಡೆದವು. ಈ ತರಗತಿಗಳನ್ನು ನಡೆಸಿಕೊಡಲು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ 'ಶ್ರೀಯುತ ಭರತ್ ಬೆಂಗಳೂರು' ಇವರು ಮಕ್ಕಳಿಗೆ, ಗುರಿ ಸಾಧನೆಗಾಗಿ ಇರುವ ಮಾರ್ಗೋಪಾಯಗಳು ಹಾಗೂ ಕೌಶಲ್ಯಾಭಿವೃದ್ಧಿಯನ್ನು ಹೊಂದಲು ಅನುಸರಿಸಬೇಕಾದ ಮಾರ್ಗಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿಕೊಟ್ಟರು. ನಂತರದ ಅವಧಿಗಳಲ್ಲಿ, ನಾವು ನಮ್ಮ ನೆನಪಿನ ಶಕ್ತಿ ಹಾಗೂ ವಿಚಾರಶಕ್ತಿಗಳನ್ನು ವೃದ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ಕೆಲವು ಆಟಗಳ ಮುಖಾಂತರ ವಿವರಿಸಿದರು.
🙏

Photos from December 2024

+16
01 Dec 2024 Kumta

Healthy Habits and Concentration Session

ಸಮುತ್ಕರ್ಷ IAS ಕುಮಟಾ....
ದಿನಾಂಕ 1/12/2024, ಭಾನುವಾರದಂದು ಶ್ರದ್ಧಾ - ಮೇಧಾ ವಿದ್ಯಾರ್ಥಿಗಳಿಗೆ 'ಉತ್ತಮ ಆರೋಗ್ಯಕರ ಅಭ್ಯಾಸಗಳು' ಎನ್ನುವ ವಿಷಯದ ಕುರಿತು ಅವಧಿಗಳು ನಡೆದವು. ಈ ಅವಧಿಗಳಲ್ಲಿ, ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ. ಶ್ರೀದೇವಿ ಭಟ್ ಅವರು ಉತ್ತಮ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿಯನ್ನು ನೀಡಿದರು.ನಂತರ ಮಕ್ಕಳಲ್ಲಿ ಸಹಜವಾಗಿ ಕಂಡುಬರುವ ಭಯ ಮತ್ತು ಕೋಪಗಳ ನಿವಾರಣೆ ಹೇಗೆ, ಎನ್ನುವದರ ಕುರಿತಾಗಿಯೂ ಮಾರ್ಗದರ್ಶನ ನೀಡಿದರು. ನಂತರ 'ತ್ರಾಟಕ ಕ್ರಿಯೆ ಅಥವಾ ತ್ರಾಟಕ ಅಭ್ಯಾಸ' ಎನ್ನುವ ಯೋಗದ ಮುಖಾಂತರ ಮಕ್ಕಳು ತಮ್ಮ ಏಕಾಗ್ರತೆಯನ್ನು ಹೇಗೆ ಹೆಚ್ಚಿಸಿಕೊಳ್ಳಬಹುದು ಹಾಗೂ ಕಣ್ಣಿನ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಕುರಿತಾಗಿಯೂ ಮಾಹಿತಿಯನ್ನು ನೀಡಿದರು.
🙏

Photos from December 2024

+16
06 Apr 2024 Kumta

Biodiversity and conservation awareness program

On the occasion of Samutkarsh IAS foundation day, an awareness program was conducted by Samutkarsh, Kumta, today at Janata Vidyalaya Dharwshwar. The program focused on creating awareness about the Biodiversity and conservation efforts in Uttarakannada. Omkar Pai, a dedicated wildlife conservator, presented a comprehensive overview of the region's biodiversity and the conservation challenges it faces.
The program had a positive impact, as two students expressed their interest in joining Omkar Pai's conservation initiatives. The participation and interest shown by the students reflect a promising future for wildlife conservation in the region.
Thanks to Samutkarsh for giving this opportunity to serve 🙏💐