Samutkarsh IAS Academy Samutkarsh IAS Nation Building through IAS
All activities
Hubballi

First session on current affairs and newspaper reading

ಇಂದು ಮುಂಜಾನೆ 9ಗಂಟೆಗೆ ಸರಿಯಾಗಿ ಹುಬ್ಬಳ್ಳಿ ಬಿವಿಬಿ ಕ್ಯಾಂಪಸ್ ನಲ್ಲಿ ಸಮುತ್ಕರ್ಷದ ಮೊದಲನೇ ಸೆಷನ್ ನಡೆಯಿತು. ಸಂಘಟನಾ ಮಂತ್ರದೊಂದಿಗೆ ಸೆಷನ್ ಪ್ರಾರಂಭವಾಯಿತು. ಐಎಎಸ್ ತರಬೇತುದಾರರಾದ ಪವನ್ ಅವರು ಮಕ್ಕಳಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ವಿವರಿಸಿದರು. ಅಲ್ಲದೆ ವರ್ತಮಾನ ಪತ್ರಿಕೆಯನ್ನು ಓದುವ ರೀತಿ , ಅದರಲ್ಲಿರುವ ಪ್ರಮುಖ ವಿಷಯಗಳನ್ನು ಟಿಪ್ಪಣಿ ಮಾಡಿಕೊಳ್ಳುವ ಬಗೆಯನ್ನು ವಿಶದವಾಗಿ ವಿವರಿಸಿದರು. ಅಲ್ಲದೆ ಇತಿಹಾಸ, ಭೂಗೋಳದ ವಿಷಯಗಳನ್ನು ಸರಳವಾಗಿ ವಿವರಿಸಿದರು. ಮಕ್ಕಳಿಗೆ ಮುಂದಿನ ಸೆಷನ್ನಲ್ಲಿ ಅವರದೇ ಆದ ವೃತ್ತಪತ್ರಿಕೆ ಯನ್ನು ರೂಪಿಸಿ ತರಲು ಹೇಳಲಾಯಿತು.