ಸಮುತ್ಕರ್ಷ ಟ್ರಸ್ಟ್‌ನ ಶ್ರದ್ಧಾ ಮತ್ತು ಮೇಧಾ (ಪ್ರಿ-ಐಎಎಸ್ ಫೌಂಡೇಶನ್ ತರಬೇತಿ) ಕಾರ್ಯಕ್ರಮದ ಉದ್ಘಾಟನೆಯು ದಿನಾಂಕ 16 ಸಪ್ಟೆಂಬರ್ ಅಂದು ಶಿರಸಿಯ ಎಂ. ಇ. ಎಸ್. ಚೈತನ್ಯ ಪಿ.ಯು. ಕಾಲೇಜಿನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶಿರಸಿ DFO ಅಜ್ಜಯ್ಯ ಅವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಜ್ಜಯ್ಯ ಜಿ. ಆರ್ ಅವರು ಮಾತನಾಡುತ್ತಾ, ತಾವು ಯಾವ ರೀತಿಯಲ್ಲಿ IFS ಪರೀಕ್ಷೆಯನ್ನು ಎದುರಿಸಿದರು ಎಂದು ತಿಳಿಸಿದರು. UPSC ಯ ವಿವಿಧ ಹುದ್ದೆಗಳ ಕುರಿತಾಗಿ, ಅದರ ತಯಾರಿಯ ಕುರಿತಾಗಿ ಅವರು ವಿವರಿಸಿದರು. ಮಕ್ಕಳು ಈ ತರಬೇತಿಯ ಪ್ರಯೋಜನ ಪಡೆದುಕೊಂಡು, ಉತ್ತಮ ಹುದ್ದೆಗಳನ್ನು ಪಡೆಯಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಎಂ. ಇ. ಎಸ್.ಚೈತನ್ಯ ಪಿ.ಯು. ಕಾಲೇಜಿನ ಅಧ್ಯಕ್ಷರಾದ ಕೆ.ಬಿ. ಲೋಕೇಶ ಹೆಗಡೆಯವರು ಮಾತನಾಡಿ, ವಿದ್ಯಾರ್ಥಿಗಳನ್ನು ಅರಸಿಕೊಂಡು ಇಂದು ವಿದ್ಯೆ ಮನೆಬಾಗಿಲಿಗೇ ಬರುತ್ತಿದೆ, ಅದರ ಪ್ರಯೋಜನವನ್ನು ಮಕ್ಕಳು ತೆಗೆದುಕೊಳ್ಳಬೇಕು. ನಮ್ಮ ಶಿರಸಿ ಮತ್ತು ಸುತ್ತಮುತ್ತಲಿನ ಮಕ್ಕಳು ಅತ್ಯುತ್ತಮ ಅಧಿಕಾರಿಗಳಾಗಿ ಆಯ್ಕೆಯಾಗಲು ಈ ಕೋರ್ಸ್ ಸಹಕಾರಿಯಾಗಲಿದೆ. ಎಲ್ಲರಿಗೂ ಇದರ ಪ್ರಯೋಜನ ಸಿಗಲಿ ಎಂದು ಹಾರೈಸಿದರು.
ಸಮುತ್ಕರ್ಷ ಟ್ರಸ್ಟಿನ ಡೈರೆಕ್ಟರ್ ಜನರಲ್ ಆದ ಜಿತೇಂದ್ರ ನಾಯಕ್ ಅವರು ಸಮುತ್ಕರ್ಷ ಟ್ರಸ್ಟಿನ ಧ್ಯೇಯೋದ್ದೇಶ, ಶ್ರದ್ಧಾ ಮತ್ತು ಮೇಧಾ ಕೋರ್ಸ್ಗಳ ಪ್ರಾಮುಖ್ಯತೆ ಮತ್ತು ಅದು ಒಳಗೊಂಡಿರುವ ಕಲಿಕಾಂಶಗಳ ಕುರಿತಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಶಿರಸಿ ಸಮುತ್ಕರ್ಷ ತಂಡದ ಪದಾಧಿಕಾರಿಗಳು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.